Monday, August 10, 2015

ಪ್ರೀತಿ ಮಾಯೇ ಹುಶಾರು

ಪ್ರೀತಿ ಮಾಯೇ ಹುಶಾರು ಅಂತಾ ದೊಡ್ಡವರು ಹೇಳಿದ ಮಾತು ಸುಲ್ಲಲ್ಲ. ಪ್ರೀತಿ ಅಷ್ಟು ಸುಲಬವಾಗಿ ಯಾರಿಗು ಸಿಗಲ್ಲ ಸಿಕ್ಕರು ಸ್ವಲ್ಪದಿನ ಮಾತ್ರ ಎಂಬುದು ಅಷ್ಟೆ ಸತ್ಯ, ಅದು ನನ್ನ ಪಾಲೀಗೆ ಒಂದಲ್ಲಾ ಎರಡು ಬಾರಿ ಆಗಿಹೋದ ಕಹಿ ಘಟನೆ, ಪ್ರೀತಿ ಯಾವತ್ತು ನನಗೆ ದಕ್ಕಲಿಲ್ಲ, ನಾನು ಪ್ರೀತಿ ಮಾಡಿದ್ದೆ ತಪ್ಪಾ,
ಮೊದಲೆ ಪ್ರೀತಿಯ ಭಲೇಗೆ ಬಿದ್ದು ಸತ್ತಿದ್ದ ನನಗೆ ಎಲ್ಲವನ್ನು ಮರೆತು ಆರಾಮವಾಗಿದ್ದೆ. ನನ್ನ ಗೇಳೆಯರ ಜೊತೆ ಆಟವಾಡಿತ್ತಾ  ನನ್ನ ಕೆಲಸ ಆಯಿತು ನನ್ನ ಮನೆಯಾಯಿತು ಅಂತ ಆರಾಮಾಗಿದ್ದೆ, ಮೊದಲೆ ಮನೆಯಲ್ಲಿ ಆಗಿರುವ ನೋವಿನಿಂದ ಮನೆ ಬಿಟ್ಟು ದುರದ ಊರು ಪುತ್ತುರಿನಲ್ಲಿ ನೆಮ್ಮದಿಯಾಗಿ ಇದ್ದೆ. ನೊಂದು ಬಂದು ಬೆಂಡಾಗಿರು ಈ ಮನಸ್ಸಿಗೆ ಪ್ರೀತಿ ತೊರೊರು ಯಾರು ಇರಲ್ಲಿ ಅನ್ನೋ ನೋವು, ಚಿಕ್ಕಂದಿನಿಂದಲೆ ಅಪ್ಪ-ಅಮ್ಮನ ಪ್ರೀತಿ ಯಿಲ್ಲದೆ ಬೆಳೆದು ದೊಡ್ಡವನಾದೆ, ಇಂತಹಾ  ಪರಿಸ್ಥಿತಿ ಆ ದೇವರು ಅನ್ನೋನು ಇದ್ದರೆ ಯಾರಿಗು ಕೊಡಬೆಡಾ ಅಂತಾ ಈಗಲು ಕೇಳೊದು ಇಷ್ಟೆ. ಯಾವತ್ತಾದರು ನಾನು ಒಬ್ಬನೆ ಅನ್ನೊದು ನನಗೆ ಚಿಕ್ಕಂದಿನಿಂದಲೆ  ಅನಿಭವಕ್ಕೆ ಬಂದಿತ್ತು,  ಆ ನೊವನ್ನು ಉನ್ನುತ್ತಾ ಬಂದಿದ್ದೆನೆ, ಇಂದಿಗೂ ಆ ನೋವು ನನ್ನನ್ನ ಸಾಯಿಸ್ತಾಯಿದೆ ಏನ ಮಾಡೊದು ನನ್ ಹಣೆಬರಹ, ಯಾರಿಗು ಹೇಳೊಕೆ ಆಗದಿರೊ ಸತ್ಯಗಲು ನನ್ನ ಹೃದಯದಲ್ಲಿ ತುಂಬಿ ಹೊಗಿವೆ,  ಮನಸ್ಸು ಕೆದಕಿದಷ್ಟು ಬರಿ ದು:ಖದ ಗುಡಾಗಿದೆ ಅಂದ್ರೆ ನಂಬಲಿಕ್ಕೆಯಿಲ್ಲ ನಿವು.  ಆದರು ನನಗೆ ತಿಳಿಯದೆ ಆ ಕುರುಡು ಪ್ರೀತಿಯ ಬಲಗೆ ಬಿದ್ದೆ.
  ನನ್ನ ಮತ್ತೆ ಆ ಕೆಟ್ಟ ಪ್ರೀತಿಗೆ ಮತ್ತೆ ಕರೇದೋಳು ನನ್ನ ಅಮ್ಮು ಅವಳು ಅಂದು ಜೂಲೈ14 ನನಗೆ ಗೊತ್ತಿಲ್ಲದೆ ಅವಳು  ನನ್ನನ್ನ ಪ್ರೀತಿ ಮಾಡತಾಯಿದ್ದಳು ಅದು ನನಗೆ ಗೊತ್ತಿತ್ತು. ಆದರೂ ಒಂದು ಬಾರಿ ಪ್ರೀತಿಯಿಂದ ಮೋಸಹೋಗಿ ನೊಂದ ಮನಸ್ಸಿಗೆ ಈ ಪ್ರೀತಿ ಬೆಡವೇ ಬೆಡ ಅನಿಸಿತ್ತು. ಆದರು ಎನೋ ಗೊತ್ತಿಲ್ಲ ಅವಳ ತುಂಟತನ ಅವಳ ನನ್ನವಟ್ಟಿಗೆ ಸಲುಗೆ ಇಂದ ಇದ್ದದ್ದು ನನಗೆ ಸರಿಯಾಗಲಿಲ್ಲ ಎಷ್ಟು ದೂರಾ ಮಾಡಿದರು ಅಷ್ಟೆ ಹತ್ತಿರಾ ಆಗುತ್ತಿದ್ದಳು. ಕೊನೆಗೆ ಒಂದು ದಿನಾ ರಾತ್ರಿ ಮನೆಗೆ ಹೊಗುವುದು ಲೇಟಾಯಿತು ಅಂದು ಮನಗೆ ಬಿಟ್ಟು ಬರಲು ಬೈಕಿನಲ್ಲಿ ಹೋದ ನನಗೆ ಅಚ್ಚರಿ ಕಾದಿತ್ತು,ಎನೂ ಮಾತಾಡತಿರಲ್ಲಿ ಸ್ವಲ್ಪ ದೂರ ಹೊದಮೇಲೆ ಅವಲು ನನ್ನ ಕೇಳಿದಳು “ನೀನು ಯಾಕೆ ನನ್ನ ಜಾತಿಯವನಾಗ ಬಾರದಿತ್ತು ಅಂತಾ” ...! ಚೇ.....ಯಾಕೆ ಜನಾ ಜಾತಿ ಅಂತಾ ಸಾಯಿತಾರೆ ಅನ್ನಿಸಿದ್ದು ನನಗೆ ಬೇರೆ ಯಾವುದೆ ಮನಸ್ಸಿನಲ್ಲಿ ಬರಲ್ಲಿಲ್ಲ. ಅಷ್ಟ ನಾನು ಅವಳಿಗೆ ಹೇಳಿದ ಮಾತು. ಅವಳು ಸುಮ್ಮನಾದಳು. ಸ್ವಲ್ಪ ದೂರ ಹೊದಮೇಲೆ ಅವಳೆ ನಿನು ತುಂಬಾ ಇಷ್ಟಾ ಆಗಿದಿಯಾ ಆದರೆ ನನ್ನ ನಿನ್ನ ಜಾತಿ ಬೇರೆ ಬೇರೆ ಮನೆಯಲ್ಲಿ ಒಪ್ಪೊದಿಲ್ಲ ಅಂದಳು, ನನಗೆ ಮತ್ತೆ ನೆನಪಾದ್ದು ಪ್ರೀತಿ ನನಗೆ ಯಾವಾಗಲು ಪರಿಕ್ಷೆ ಮಾಡುತ್ತಾ ಇರುತ್ತದೆ ಅನ್ನಕೊಂಡು ಸುಮ್ಮನಾದೆ, ಕೊನೆಗು ಹೇಳಿಯೇ ಬಿಟ್ಟಳು ಆ ಮೂರು ಬಿಟ್ಟ ಮುರಕ್ಷರ, ಐ ಲವ್ ಯು ಅಂತಾ....!ಎಲ್ಲೊ ಒಂದು ಕಡೆ ಪ್ರೀತಿಯಿಂದ ದೂರ ಯಿದ್ದ ನನಗೆ ಮತ್ತೆ ಆ ಸುಳಯಲ್ಲಿ ಸಿಲುಕುವ ಹಾಗೇ ಬಾಸವಾಯಿತು ಕಣ್ಣಲ್ಲಿ ನಿರು ತುಂಬಿತ್ತು, ಕೊನೆಗು ಮನೆ ಬಂತು ಇನ್ನೇನೂ ಬೈಕ್ ನಿಲ್ಲಿಸಲು ಬ್ರೇಕ್ ಹಾಕಿದೆ ಹಿಂದಿನಿಂದ ಬಂದ ಸ್ವರ ಕೇಳಿ ಏನು ಮಾಡಬೇಕು ಅಂತಾ ಗೊತ್ತಾಗಲಿಲ್ಲ ಮನೆಹತ್ತಿರಾ ನಿಲ್ಲಿಸಬೇಡಾ ಮುಂದೆ ಹೋಗು ಮಾತಾಡಬೆಕು ಅಂದಳು, ಎನು ಮಾಡಬೆಕು ಅನ್ನದೆ ಮುಂದೆ ಸಾಗಿದೆ, ಆಗ ತುಂಬಾನೆ ಕಸಿವಿಸಿ ಆಯಿತು ಮನಸ್ಸು, ನನ್ನ ಮನಸ್ಸು ವಂದು ಸಲಾ ಎಲ್ಲೋ ಹೋಗಿಬಿಟ್ಟಿತ್ತು ಎಷ್ಟು ಕರೆದರು ಬಾರದ ಮನಸ್ಸು ಆದಾಗಲೆ ಪ್ರೀತಿಗೆ ಶರಣಾಗುತ್ತಿತ್ತು ಎಷ್ಟು ಮನಸ್ಸು ಗಟ್ಟಿ ಮಾಡಿದರು ಕೇಳದ ಹುಚ್ಚು ಮನಸ್ಸು ಪ್ರೀತಿಗೆ ಶರಣಾಗಿ ಬಿಟ್ಟಿತ್ತು.  ಆದರು ಗಟ್ಟಿ ಮನಸ್ಸಿನಿಂದ ನೋಡೋನಾ ಅಂದೆ, ಅಲ್ಲಿಗೆ ಅವಳನ್ನು ಮನೆಗೆ ಬಿಟ್ಟು ಬಂದೆ. ಅಂದು ರಾತ್ರಿ ಆದ ಘಟಣೆ ಇಂದಿಗು ಮರೆತಿಲ್ಲ, ಅಂದಿನ ರಾತ್ರಿ ನಿದ್ದೆ ಮಾಡೊನಾ ಅಂದ್ರೆ ನಿದ್ದೆ ಬರತಿಲ್ಲ ನನ್ನ ಮನಸ್ಸು ನನಗೆ ಕಾನದೆ ಎಲ್ಲೋ ಹೊಗಿತ್ತು. ಬೇಳಿಗ್ಗೆ ಅಂದು ಅವಳನ್ನು ನೊಡಲು ಯಾಕೊ ಮುಜುಗುರ ಸಂಕೊಚ ನನ್ನ  ಕಾಡತಾಯಿತ್ತು. ಅಂದು ಮತ್ತೆ ಬೈಕೇರಿ ಸುತ್ತಾಡೋನಾ ಅಂತಾ ಹೊರೆಟೆ ಅವಳು ನನ್ನ ಕರೆದು ಕೊಂಡು ಹೊದದ್ದು ಪೂತ್ತೂರಿನಿಂದ ಸರಿ ಸುಮಾರು 60ಕಿಮಿ ಇರು ಶಿರಾಡಿ ಘಾಟ್ ಗೆ ಹೊದೆ ಹೊದೆ ಸಕಲೇಸಪುರ ಹತ್ತಿರಾ ಬಂದೆವು ಆಗ ಯಾಕೊ ಕೋಪ ಬಂತು ಇನ್ನು ಎಲ್ಲಿಗೆ ಬರಿ ಸುತ್ತಾಡೊದೆ ಆಯಿತು ಕೆಲಸಾ ಯಿಲ್ಲ ಎನು ಇಲ್ಲ ಅಂತಾ ಗದರಿಸಿದೆ, ಅವಳು ಉತ್ತರಿಸಲಿಲ್ಲ. ಅದರಲ್ಲಿ ಮಳೆ ಬೇರೆ ಜೋರಾಗಿತ್ತು ಸುಮ್ಮನೆ ವರಗಿ ಹಿಂದೆ ಕೂತಿದ್ದಳು. ತಿರುಗಿ ಬಂದೆವು. ಅಂದು ಅವಳು ನನಗೆ ಎನು ಹೇಳಲು ಕರೆದುಕೊಂಡು ಬಂದಿಳು ಅನ್ನೋದು ಮನಸ್ಸಿಗೆ ಬಂತು, ನನಗು ಎನೋ ಹೇಳ ಬೇಕು ಅಂತಾ ಅನಿಸ್ತಾಯಿತ್ತು, ಎನೋ ಗೊತ್ತಿಲ್ಲಾ ಅವಳ  ಪ್ರಿತೀಗೆ ಶರಣಾಗಿ ಬಿಟ್ಟಿದ್ದೆ, ಇಬ್ಬರು ಪರಸ್ಪರ ಪ್ರೀತಿಯನ್ನ ಹೇಳಿಕೊಂಡೆವು, ಅಲ್ಲಿಗೆ ನನ್ನ ಹೊಸ ಜೀವನವೆ ಶುರು ಆಗಿತ್ತು, ಯಾರ ಹಂಗಿಲ್ಲದೆ ಪ್ರಣಯ ಪಕ್ಷಿಯಂತೆ ಹಾರಾಡತಾಇದ್ದೆವು, ಸುಮಾರು ತಿಂಗಳು ಆಟ, ಊಟ, ಪ್ರೀತಿಯಲ್ಲಿ ತೇಲಾಡುತ್ತಾಯಿದ್ದೆವು. ಅದು ಅಕ್ಟೊಬರ್ ತಿಂಗಳು ರಂಜಾನ ದಿ ಎನೋ ಗೊತ್ತಿಲ್ಲ ಯಾಕೋ ಅವಳನ್ನು ನೋಡಿ ಕೋಂಚ ದಂಗ ಆದೆ ಅವಳನ್ನು ಕೇಳಿಯೆ ಅವಳ ಕೆನ್ನೆಗೆ ಮುತ್ತು ನಿಡಲು ಅನುಮತಿ ಪಡೆದೆ, ಅದೇನು ಆಯಿತು ಗೊತ್ತಿಲ್ಲ, ಕಾಮ ನಮ್ಮಿಬ್ಬರನ್ನ ಆವರಿಸಿತ್ತು ಯಾವುದೆ ಬಯವಿಲ್ಲದೆ ಕಾಮಕ್ಕೆ ಶರಣಾದೆವು. ಚೇ ತಪ್ಪು ಮಾಡಿದೆವು ಅಂತಾ ಇಬ್ಬರು ಆತ್ತದ್ದು ಊಂಟು, ಆದರೆ ನಮ್ಮ ಪ್ರೀತಿ ಘಾಢವಾಗಿತ್ತು ಮದುವೆ ಅಗುವ ಎಲ್ಲ ದೃಡ ನಿರ್ದಾರವು ಇತ್ತು. ಹೀಗೆ 6ತಿಂಗಳು ಪ್ರೀತಿಯ ದಿನಗಳು ಕಳೆದವು .......... ತುಂಬಾನೆ ಹತ್ತಿರಾ ಆಗಿಬಟ್ಟೆವು ಒಬ್ಬರನ್ನು ಬಿಟ್ಟು ಇರದಷ್ಟು ಪ್ರೀತಿ ನಮ್ಮಿಬ್ಬರಲ್ಲಿ ಬೆಳೆದಿತ್ತು. ಅವಳನ್ನು ಪ್ರೀತಿಯಿಂದ ಅಮ್ಮು ಅಂತಾ ಹೆಸರಿಟ್ಟೆ, ಅದು ಅವಳಿಗೂ ಇಷ್ಟಾ ಆಗಿತ್ತು, ಅವಳು ಸಹಾ ನನ್ನನ್ನಾ ಅಮ್ಮಿ ಅಂತಾನೆ ಕರಿತಾಯಿದ್ದಳು,ಹಿಗೆ ಸುಮಾರು ಆರು ತಿಂಗಳುಗಳು ಕಳೆದವು. ತುಂಬಾನೆ ಹತ್ತಿರಾ ಅದೇವು, ಅವರ ಮನೆಯವರು ಕೂಡಾ. ಮುಂದೆ ಅದ್ಯಾಕೊ ಅವಳು ತುಂಬಾನೇ ನನ್ನ ದೂರಾ ಇರಲಿಕ್ಕೆ ಹೇಳತಾಯಿದ್ದಳು, ಕೇಳಿದರೆ ನೀನು ತುಂಬಾ ಹಚ್ಚುಕೊಂಡುಬಿಡತಿಯಾ, ಅದಕ್ಕೆ ಮುಂದೆ ನಾನೆಲ್ಲಾದರು ಹೋದರೆ ನಿನಗೆ ಬಿಟ್ಟು ಇರಲಿಕ್ಕೆ ಆಗಲ್ಲ ಇಗಿಂದಲೆ ಟ್ರೈಮಾಡು ಅಂತಾ ಅದ್ಯಾಗೆ ಬೀಟ್ಟು ಇರೋದು ಅಂತಾ ನನಗೆ ಕೊನೆಗು ಗೊತ್ತಾಗಲಿಲ್ಲ, ಕ್ರಮೇಣ ಹೀಗೆ ತಿಂಗಳಗಳು ಕಳೆದವು  ಮುಂದೆ ಅದ್ಯಾವ ಕಣ್ಣು ನಮ್ಮ ಮೇಲೆ ಬಿತ್ತು ಗೊತ್ತಾಗಲಿಲ್ಲ ಅಲ್ಲಿಂದ ಬರಿ ಜಗಳ, ಕೋಪ ಸಣ್ಣ ವಿಷಯಕ್ಕೆ ಜಗಳ ಶುರು ಆಯಿತು. (ವಂದು ವಿಷಯ ಇಲ್ಲಿ ಅವಳು ಸಹಾ ಪ್ರಿತಿಯಲ್ಲಿ ಮೊಸ ಹೋಗಿದ್ದವಳು ಅವಳದ್ದು ನಾಲ್ಕೂ ವರ್ಷದ ಪ್ರಿತಿ ಅವರಿಬ್ಬರಲ್ಲಿ ಯಾಕೆ ಜಗಳ ಆಗಿತ್ತು ಅಂತಾ ಅವಳೆ ನನ್ನಲ್ಲಿ ಹೇಳಿರಿರಲಿಲ್ಲ ನಾನು  ಅದ್ಯಾವುದನ್ನು ಅವಳಿಗೆ ಕೇಳಿರಲಿಲ್ಲ ಅವಳ ಮೊದಲ ಪ್ರೀತಿ ಬಗ್ಗೆ ನಾನು ಯಾವತ್ತು ಅವಳ ಹತ್ತಿರಾಜಗಳ ಮಾಡಿಲ್ಲ ಅದು ಅವಳಿಗು ಗೊತ್ತು.)  ನಾನ್ಯಾವತ್ತು ಅವಳಿಂದ ಆ ತರಹದ ಪ್ರೀತಿ ಬಯಸಿದವನಲ್ಲ ಆದರು ವಿಧಿ ಅನ್ನೋದು ನಮ್ಮಿಬ್ಬರನ್ನ ತುಂಬಾನೆ ಸತಾಯಿಸುತ್ತಾ ಬಂತು. ಆದರು ಸಹಿಸುತ್ತಾ ಬಂದೆ, ಇತ್ತಿಚಿನ ದೀನಗಳಲ್ಲಿ ವಿಪರಿತನೇ ಜಗಳ, ಇಬ್ಬರು ವಾರಗಟ್ಟಲೆ ಮಾತು ಬಿಟ್ಟು ಒಳಗೊಳಗೆ ಕೊರಗುತ್ತಾಯಿದ್ದೆವು. ಆ ಜಗಳ ಬರಿ ನಾನೆ ಮಾಡತಯಿದ್ದೆ ಅಂತಾ ಅವಳು ಹೇಳ ಬಹುದು. ಅವಳು ಮಾಡತಾಯಿರೊದು ನನಗೆ ಇಷ್ಟಾ ಆಗತಾಯಿರಲಿಲ್ಲ. ನನ್ನ ತುಂಬಾನೇ ದೂರಾ ಮಾಡತಾಯಿದ್ದಳು ಕೇಳಿದರೆ ನಿನು ಸ್ವಲ್ಪ ದೀನ ದೂರಾ ಇರೋಕೆ ಟ್ರೈ ಮಾಡು ಅಂತಾಯಿದ್ದಳು ಅದೇಗೆ ಇರೋದು ಅಂತಾ ನನಗೆ ಆಗತಿರಲಿಲ್ಲ ದೆ ನನಗೆ ಅವಳಿಗೆ ಜಗಳ ಅಗತಿರೊ ಮಾತು.ಅವಲು ಸ್ವಲ್ಪ ಲೇಟ ಆಗಿಬಂದರೆ ಸಹಿಸಕೊಳ್ಳೊಕೆ ಆಗತಿರಲಿಲ್ಲ, ನೀನ್ನಾ ನೋಡಬೆಕು ಅಂತಾ ಹೇಳಿದರೆ ಅವಳು ಮೊನ್ನೆತಾನೆ ಬೇಟಿಯಾಗಿದೆವೆ ಮತ್ತೆನಾ ? ಅಂತಾ ಹೇಲತಾಯಿದ್ದಳು ತುಂಬಾನೆ ಬೇಜಾರ ಆಗತಾಯಿತ್ತು. ಮತ್ತೆ ಅವಳು ಎಲ್ಲಿ ಹೊಗಬೆಕಾದರು ಹೇಳತಾಯಿದ್ದಳು, ಆದರೆ ನನ್ನ ಹತ್ತಿರಾ ಬರೋದಕ್ಕೆ ಮಾತ್ರ ಅವಳಿಗೆ ಬೇಜಾರು ಆಗತಿತ್ತೊನೋ ಗೊತ್ತಿಲ್ಲಾ ನೆರವಾಗಿ ಹೇಳಿದರೆ ಬೇಜಾರ ಮಾಡಕೊತಾಯಿರಲಿಲ್ಲ ಆದರೇ ಅವಳು ಹಿಂದಿನೀಂದಳೆ ನನ್ನ ದೂರಾ ಮಾಡತಾ ಬಮದಳು ಮಾಡಲಿ,  ಕೇಳಿದರೆ ಬರಿ ನೀನೆನಾ ನನಗೆ ನನ್ನ ಪ್ಯಾಮಲೀ ಇದೆ ನನಗೂ ರಿಷ್ಕ್ ಅನ್ನೋದು ಇರತ್ತೆ ಅಂತಾ ಹೆಳತಾಯಿದ್ದಳು. ಅದು ನನಗೆ ತುಂಬಾನೆ ಮನಸ್ಸಿಗೆ ಬೆಜಾರ ಮಾಡಿತ್ತು ಅಷ್ಟೆ ಅಲ್ಲ ನನ್ನ ಪುಟ್ಟ ಹೃದಯ ಒಂದು ಸಾರಿ ನಿಂತು ಬಿಡತಾಯಿತ್ತು, ಒಂದಿನಾ ಕೇಳಿದೆ ಅಮ್ಮು ನಿನಗೆ ನನಕಿಂತಾ ನಿನ್ನ ಪ್ರೇಂಡೆ ಮುಖ್ಯ ಅಂತಾ. ಅವಳು ನನಗೆ ಹೇಳಿದ್ದು ನೀನಕಿಂತ ನನ್ನ ಪ್ರೇಂಡೆ ಮುಖ್ಯ ಅಂತಾ, ಚೇ ಇಷ್ಟು ದಿ ಮಾಡಿದ ಪ್ರೀತಿ ನೀರಿನಲ್ಲಿ ಕೊಚ್ಚಿ ಹೋದಹಾಗೆ ಆಯಿತು.ನಾನು ಎಷ್ಟು ಸಾರಿ ಕೇಳಿದರು ಅವಳಿಂದ ಬಂದ ಮಾತು ವಂದೆ ಪ್ರೇಂಡ್ಸ್ ಅಂತಾ, ಇರಲಿ ನನಗು ಒಂದು ಸ್ವಲ್ಪ 30% ಪ್ರೀತಿ ಕೊಡು ಅಂದ್ರೆ ಆಗೊದಿಲ್ಲ ಅಂದಳು. ಹೇಗಾಗಿರಬೇಡಾ ನನಗೆ. ಗೇಳೆಯರೆ ನಿವೆ ಹೇಳಿ ನಾನು ತಪ್ಪ ಮಾಡಿದ್ದಾ ಅವಳಾ ಅಂತಾ ನನ್ನ ತಪ್ಪದ್ದರೆ ಯಾವತ್ತು ನಿಮಗೆ ಮುಖಾನೆ ತೊರಿಸದ ಹಾಗೆ ದೂರ ಹೋಗತೆನೆ. ಆದರು ಪ್ರೀತಿಗೆ ಮೋಸಾಗಬಾರದು ಅನ್ನೋದೆ ನನ್ನ ಆಸೆ ಎಷ್ಟೂ ಜನ ಪ್ರಿತಿ ಮದರು ಅಂತಾ ನಂಬಿ ಬದುಕಿದವರು ಇದ್ದಾರೆ ಆ ಜನಕ್ಕೆ ಮುಂದಿನ ಪ್ರೇಮಿಗಳಿಗೆ ಪ್ರಿತಿ ಅಂದ್ರೆ ಕೋಪಾ ಬರಬಾರದು, ಪ್ರೀತಿ ಇರಬೇಕು ಅಮರವಾಗಿರಬೆಕು ನನ್ನ ತರಾ ನಾಯಿ ಪ್ರೀತಿ ಯಾರು ಮಾಡಬೇಡಿ ಪ್ಲೀಜ್ ಗೆಳೆಯರೆ.....ಅವಳು ತುಂಬಾನೆ ಒಳ್ಳೆಯವಳು ಅವಳು ಯಾಕೆ ಹಾಗಾದಳು ಅಂತಾ ಇನ್ನೂ ಗೊತ್ತಾಗಲಿಲ್ಲ. ಗೊತ್ತಾಗೋದು ಬೇಡಾ, ಮತ್ತೆ ಆ ಪ್ರೀತಿಯಲ್ಲಿ ಬದುಕಿ ಬಾಳುವ ಶಕ್ತಿ ನನಗಿಲ್ಲ ಅವಳು ಎಲ್ಲೆ ಇದ್ರು ಚನ್ನಾಗಿರಲಿ. ಅವಳ ಬದುಕು ಹಸಿರಾಗಲಿ, ದುಖ ಮಾತ್ರ ನನಗೆ ಇರಲಿ ಚಿಕ್ಕಂದಿನಿಂದಲೆ ಕಷ್ಟ ಉನ್ನೂತ್ತಾ ಬಂದಿದ್ದೆನೆ ಈ ಕಷ್ಟ ಯಾವಲೆಕ್ಕ. ಹತ್ತರಲ್ಲಿ ಹನ್ನೋಂದು ಅಂತಾ ಇದ್ದುಬಿಡುತ್ತೆನೆ, ನಾನು ಹೆಳೊದು ಒಂದೆ ಮಾತು ನನ್ನಷ್ಟು ಪ್ರಿತಿ ಮಾಡೊರು ಈ ಭೂಮಿಮೇಲೆ ಅವಳಿಗೆ ಯಾರು ಸಿಗಲಿಕ್ಕೆಯಿಲ್ಲ. ಸಿಕ್ಕರೆ ಅವಳ ಮಾಡಿದ ಪುಣ್ಯಕ್ಕೆ ಪ್ರತಿ ಫಲ, ಸಿಗದ್ದಿದ್ದರು ಪ್ರತಿಫಲ ಇದ್ದೆ ಇರುತ್ತೆ.
ಒಂದು ಸನ್ನ ಆಸೆ ಬದುಕ ನುಂಗಿತೆ ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತು ಅಂತಾ ಅವಾಗಲೆ ಗೊತ್ತಾಗಿದ್ದು.  ಅವಳನ್ನು ನಂಬಿ ಇದ್ದ ಗೆಳೆಯರು ಇಲ್ಲದಂತಾಯಿತು. ಈಗ ಅನಿಸ್ತಾಯಿತ್ತು ಯಾಕಾದರೂ ಹಾಳಾದ ಪ್ರೀತಿಗೆ  ಬಿದ್ದು ಎಲ್ಲರನ್ನು ಕಳೆದು ಕೊಂಡೆ ಅವಳನ್ನು ಬಿಟ್ಟು ಇಂದಿಗು ಇರಲಿಕ್ಕೆ ಆಗತಿಲ್ಲ, ದು:ಖ ಆದಾಗೇಲ್ಲಾ ಕಣ್ಣಿರೋರಿಸೂ ಕೈ ಇಲ್ಲಾ ಅನ್ನೋ ಕೊರಗು ಒಂದೆ,
 ಅದ್ಯಾವ ಮುಖ ಇಟ್ಟಕೊಂಡು ಬರುತ್ತಾಳೆ. ಅವಳನ್ನು ಇಂದಿಗೂ ನೆನೆದರೇ ಕೋಪ, ಅಷ್ಟೆ ಪ್ರೀತಿ ಆದರೆ ಅದು ಇಂದಿಗೆ ಕೋನೆ ಇನ್ನೂ ಅವಳು ಯಾರೊ ನಾನು ಯಾರೋ. ಈ ಹಾಲು ಪ್ರೀತಿಯ ನೆನಪು ಮಾತ್ರ ಜೊತೆಗೆ......
ಪ್ಲಿಜ್......  ನನಗೆ ಮಾಡಿದ ಮೋಸ ಯಾರಿಗೂ ಮಾಡಬೇಡಾ ಇದೊಂದೆ ನನ್ನ ಆಸೆ..
                                        .ಇಂತಿ ನಿನ್ನ ಅಮ್ಮು

Monday, February 25, 2013

ಸಮೂಹದೊಳಗಿನ ಸತ್ಯ: ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ?

ಸಮೂಹದೊಳಗಿನ ಸತ್ಯ: ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ?: ಆತನ ಹೆಸರು ಮುತಿವುರ್ ಸಿದ್ದಿಕಿ . ಕೆಲಸ ಪತ್ರಕರ್ತ . ರಾಷ್ಟ್ರೀಯ ಇಂಗ್ಲಿಷ್ ದೈನಿಕ ಒಂದರಲ್ಲಿ ವರದಿಗಾರ. ಇದ್ದಕ್ಕಿದ್ದ ಹಾಗೆ ಸಿದ್ದಿಕಿ ಭಯೋತ್ಪಾಧಕನ...

ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ?

ಆತನ ಹೆಸರು ಮುತಿವುರ್ ಸಿದ್ದಿಕಿ . ಕೆಲಸ ಪತ್ರಕರ್ತ . ರಾಷ್ಟ್ರೀಯ ಇಂಗ್ಲಿಷ್ ದೈನಿಕ ಒಂದರಲ್ಲಿ ವರದಿಗಾರ. ಇದ್ದಕ್ಕಿದ್ದ ಹಾಗೆ ಸಿದ್ದಿಕಿ ಭಯೋತ್ಪಾಧಕನಾಗಿಬಿಟ್ಟ. ದೇಶದಾದ್ಯಂತ ಸ್ಟೋಟ ನಡೆಸುವ ಯೋಜನೆ ಹೊಂದಿದ್ದ ಉಗ್ರರ ಮಾಸ್ಟರ್ ಪ್ಲಾನರ್ ಆಗಿಬಿಟ್ಟ. ರಾಜ್ಯದ ಪ್ರಮುಖ ಪತ್ರಕರ್ತರ ಕೊಲೆ ಸಂಚಿನ ರುವಾರಿಯಾಗಿಬಿಟ್ಟ. ಇನ್ನು ಪೊಲೀಸರಂತ್ತೂ ಈತನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಮಾದ್ಯಮದ ಮುಂದೆ ಹರಿದು ಬಿಟ್ಟರು. ಇಷ್ಟೇ ಸಾಕಾಯ್ತು ಒಬ್ಬ ಪತ್ರಕರ್ತ ಯುವಕನ ಜೀವನ ಅಲ್ಲಿಗೆ ಮುಗಿದೇ ಹೋಯಿತು. ಆತ ತಪ್ಪು ಮಾಡಿದ್ದಾನೋ,ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ? ಯಾರು ಈ ಬಗ್ಗೆ ಚಿಂತಿಸಲಿಕ್ಕೆ ಹೋಗಲಿಲ್ಲ. ಹೆಸರಲ್ಲಿ ಮುಹಮ್ಮದನೀಯ ಜೊತೆಗೆ ಭಯೋತ್ದಾದಕನೆಂದ ಘೋರ ಆರೋಪ ಇಷ್ಟೇ ಸಾಕಾಯ್ತು ಮಾಧ್ಯಮಗಳಲ್ಲಿ ಬಣ್ಣ ಬಣ್ಣದ ವರದಿಗಳೂ ಪ್ರಸಾರವಾದವು. ಈತನೊಬ್ಬ ಪತ್ರಕರ್ತನಾದರೂ ಶಂಕಿತ ಉಗ್ರ ಎಂಬ ಹಣೆಪಟ್ಟಿ ಬಿದ್ದ ಕೂಡಲೇ ಯಾರ ಪ್ರಗತಿಪರ ಚಿಂತಕರೂ , ಪತ್ರಕರ್ತ ಮಿತ್ರರೂ ಅಷ್ಟೇ ಯಾಕೆ ಆತನ ಕೆಲಸ ಮಾಡುವ ಪತ್ರಿಕೆಯೂ ಆತನ ಬಗ್ಗೆ ಧ್ವನಿ ಎತ್ತಿಲ್ಲ. ಯಾಕೆಂದರೆ ಆತ “ಶಂಕಿತ ಉಗ್ರ” ಆದರೆ ಶಂಕಿತ ಉಗ್ರ ಎಂಬ ಆರೋಪದಡಿಯಲ್ಲಿ ಬಂಧಿತನಾದ ಸಿದ್ಧಿಕಿ ಮೇಲೆ ಹಾಕಲಾದ ಆರೋಪಕ್ಕೆ ಯಾವುದೇ ಸಾಕ್ಷಾಧಾರ ಇಲ್ಲದೇ ಇರುವುದರಿಂದ ರಾಷ್ಟ್ರೀಯ ತನಿಖಾ ದಳ ಈತನ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಟ್ಟಿತ್ತು. ಇದೀಗ ವಿಶೇಷ ನ್ಯಾಯಾಲಯ ಸಿದ್ಧಿಕಿಯನ್ನು ಕೂಡಲೇ ಬಿಡುಗಡೆ ಗೊಳಿಸುವಂತ್ತೆ ಆದೇಶ ನೀಡಿದೆ. ಈ ಪ್ರಕರಣವನ್ನು ನೋಡಿದ್ರೆ ನಿಜಕ್ಕೂ ಖೇದಕರ ಅನ್ನಿಸುತ್ತಿದೆ. ನಾನು ನಿರಪರಾದಿಯಾಗಿಯೂ ಸಿದ್ಧಿಕಿ ಎಂಬ ಹೆಸರಿದ್ದ ಕಾರಣ ಶಂಕಿತ ಉಗ್ರ ಅನ್ನಿಸಿಕೊಳ್ಳಬೇಕಾಯಿತು. ದೇಶದ ಜನರೆಲ್ಲಾ ಈತನನ್ನು ನೋಡಿ ಅಸಹ್ಯ ಪಡುವಂತ್ತಾಯಿತು. ಎಂಥಹಾ ಮಗನಿಗೆ ಜನ್ಮ ಕೊಟ್ಟೆಯಾ ನೀ ಮಹಾಮ್ಮಾರಿ ಅಂತ್ತ ಎಲ್ಲರೂ ಈತನ ಹೆತ್ತವ್ರಿಗೆ ಕ್ಯಾಕರಿಸಿ ಉಗಿಯುವಂತ್ತಾಯಿತು. ಭಯೋತ್ಪಾಧನೆ , ನಕ್ಸಲ್ ನಿಗ್ರಹದ ಹೆಸರಲ್ಲಿ ಹೀಗೆ ನೈಜ್ಯ ಆರೋಪಿಗಳ ಜೊತೆಗೆ ಇಂಥಹಾ ಅಮಾಯಕರೂ ಎಲ್ಲರ ಪಾಲಿಗೆ ಕೆಟ್ಟವರಾಗಿ ಬಿಂಬಿತರಾಗಿಬಿಡುತ್ತಾರೆ. ಪೊಲೀಸರ ಮಾಧ್ಯಮಗಳ ಸಣ್ಣ ತಪ್ಪುಗೆ ಹೀಗೆ ಅಮಾಯಕರೂ ಬಲಿಯಾಗುತ್ತಲೇ ಇರುವುದು ವಿಪರ್ಯಾಸ. ಭಯೋತ್ಪಾಧನೆ ಎಂಬುವುದು ಖಂಡಿತ ಸಹಿಸಲಸಾಧ್ಯ . ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ನೈಜ್ಯ ಭಯೋತ್ದಾದಕರಿಗೆ ಕಠಿಣ ಶಿಕ್ಷಯಾಗಲೇ ಬೇಕು. ಯಾಕೆಂದರೆ ಇವರೆಲ್ಲಾ ಅಮಾಯಕರ ರಕ್ತ ಚೆಲ್ಲಿ ಖುಷಿಪಡುವವರು. ಮಾನವಿಯತೆಯ ಮರೆತ ಕ್ರೂರಿಗಳು. ಈ ಕ್ರೂರಿಗಳನ್ನು ಯಾವ ಧರ್ಮಮಿಯರೂ ರಕ್ಷಿಸಬಾರದು. ಆದ್ರೆ ನಿರಪರಾದಿಗಳಿಗೆ ಇಂಥಹಾ ಪಟ್ಟವನ್ನು ಕಟ್ಟುವುದು ಅಷ್ಟೇ ಕ್ರೂರತನ. ದೇಶದ ಸಂವಿಧಾನ ಹೇಳಿದಂತ್ತೆ ಸಾವಿರ ಅಪರಾಧಿಯೂ ಶಿಕ್ಷೆಯಿಂದ ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದಲ್ಲವೇ ?????

Friday, April 27, 2012

ಕಪ್ಪು ಮಂಗಗಳ ಗುಲಾಮಗಿರಿ



.
 ಜಗತ್ತಿನ ಅತ್ಯಂತ ಪ್ರಾಚಿನ ಹಾಗೂ ಸಿರಿವಂತ ರಾಷ್ಟ ಬಾರತ. ಜಗತ್ತಿನ ಎಲ್ಲಜನರ ಕಣ್ಣು-ಕುಕ್ಕಿದ ರಾಷ್ಟ್ರವೂ ಬಾರತವೇ ಗ್ರೀಕಿಂದ ಮೋಗಲ್ ರವರೆಗೆ ಶಕರು ಹೂನರಿಂದ ಶೂರುಮಾಡಿ ಬಿಳಿಯರವರೆಗೆ ಲೋಟಿಗಾಗಿ ಬಹೂಸಂಖ್ಯೆ ಜನ ದಾವಿಸಿಬಂದದ್ದು ಬಾರತಕ್ಕೆ. ಅಲ್ಲದೆ ಮತ್ತೇನು, ಉತ್ತರದ ಹೀಮಾಲಯ ಮದ್ಯಬಾಗದಲ್ಲಿ ಘಣವಾಗಿ ಹರಡಿಕೋಂಡಿರು ಕಾಡುಗಳು, ದಕ್ಷಿಣದಲ್ಲಿ ಮಿಲನಗೊಳ್ಳುವ ಮೂರು ಭವ್ಯ ಸಾಗರಗಳು, ಮಧ್ಯಿ ನ್ನೋಂದು ಮರಭೂಮಿ ಅದಕ್ಕೆ ಸಂವಾದದಂತಿರುವ ನದಿಗಳು ತೊರೆಗಳು ಜಲಪಾತಗಳು ಕಣಬಿಟ್ಟ್ರೆದೂರಕ್ಕೆಕಾನುವ ಹೊಲಗದ್ದೆಗಳು ಸಮೃದ್ದ ಪೈರುಗದ್ದೆಗಳು   ಕಲ್ಲನ್ನು ಕರಗಿಸಿ ಬೆಳೆಯನ್ನುತಗೆಯುವ ಇಲ್ಲಿನ ಸಮರ್ತ ರೈತ.  ದೇವರನ್ನು ನಾಚಿಸುವ  ದೇವ ಮನುಷ್ಯರು ಇಂತಹ ರಾಷ್ಟ್ರ ಮತ್ತಿನ್ನೆಲ್ಲಿ ಇರಲು ಸಾದ್ಯಹೇಳಿ.....
ಪ್ರಾಚೀನ ಇತೀಹಾಸತಜ್ಞ್ರರು ಆದುನಿಕ ಚರಿತ್ರಕಾರರು ಭಾರತ ಎಂದೊಡನೆ ಹಿರೀ ಹಿರೀ ಹಿಗ್ಗೊದು ಈ ಕಾರಣ ಗೋಸ್ಕರವೇ  ಇಂತಹ ಸಿರಿವಂತ ಬಾರತವನ್ನು ಲೂಟಿಗೈಲೇಂದೆ ಜಗತ್ತು ಧಾವಿಸಿ ಬಂತು  ಕೆಲವ್ರು ಲೂಟಿಗೈದುಹೊರಟ್ರು ಇನ್ನು ಕೆಲವ್ರು ಆಳಲೆಂದು ಇಲ್ಲೆ ಉಳಿದ್ರು.  ಹಾಗೆ ಉಳಿದವರಲ್ಲಿ ನಮ್ಮನ್ನು ಆಳಿದ ಬಿಳಯರೆ ಪ್ರಮುಖರು.  ಭಾರತವನ್ನು ಸದಾ ಕಾಲ  ತಮ್ಮ ಗುಲಾಮಿ ರಾಷ್ಟವಾಗಿಸಬೊಳ್ಳಬೆಕೆಂಬ  ಮನದಿಚ್ಚೆಯಿಂದಲೆ ಬಂದವ್ರು ಅವ್ರು. ನಾವು  ಉಹಿಸಲಾಗದಷ್ಟು ಸಂಪತ್ತನ್ನು ಅವ್ರು ಸೂರ್ಯಗೈದಿದಲ್ಲದೆ ಈ ದೇಶದ ರೈತನ ಗೂಣು ಮುರಿದ್ರು  ಅಪಾರ ತೆರಿಗೆಯನ್ನು ಹೇರಿ ಕೃಷಿ ಮಾಡುವುದನ್ನೆ ದುಸ್ಥಿರಗೊಳಿಸಿದ್ರು ರೈತನಿಗೆ ಜಮಿನುಮಾರಲು ಪ್ರೋತ್ಸಾಹಿಸಿದ್ರು  ಬೇಳೆದ ಬೇಲೆಯನ್ನು ತಾವು ನಿರ್ದ್ರಿರಿಸಿದ್ರು ಒಂದು ಕಾಲದಲ್ಲಿ ಜಗತ್ತಿಗೆ ಅಣ್ಣ ಕೊಡುತ್ತಿದ್ದ ಬಾರತ  ರೈತ ಕ್ಷಾಮದ ಕೂಪದಲ್ಲಿ ಬಿದ್ದ.
ಇಷ್ಟಕ್ಕೆ ಬ್ರೀಟಿಷರು ತೃಪ್ತಿಪಟ್ಟುಕೊಳ್ಳಲಿಲ್ಲ  ಬಾರತಿಯರನ್ನು ಅಮಾನುಷವಾಗಿ ಕಂಡ ಕಂಡಲ್ಲಿ ಬಡಿದ್ರು  ಸಾವಿರಾರು ಜನರನ್ನು ಸಾಮೂಹಿಕವಾಗಿ ಹತ್ಯಮಾಡಲಾಯಿತು. ಗಂಡನನ್ನು ಕಳೆದುಕೊಂಡ ಹೆಂಡದಿರು ಎಷ್ಟೊ ತಂದೆತಾಯಿಂದಯರನ್ನು ಕಳೆದುಕೊಂಡ ಮಕ್ಕಳು  ದುಡಿಯುವ ಮಕ್ಕಳನ್ನು ಕಳೆದು ಕೊಂಡ ಅಪ್ಪ ಅಮ್ಮಂದಿರ ರೋದನ ಬಾರತವನ್ನು ಹಿರಿಯಲಾರಂಬೀಸಿತು.
ಈ ದೇಶದ ತರುಣರು ಸುಮ್ಮನಿರಲಿಲ್ಲ  ಬ್ರೀಟಿಷರಿಂದ ಬಾರತವನ್ನು ಮುಕ್ತಿಗೊಳಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಿದ್ದರಾಗಿನಿಂತರು.
  15ರ ಮೋರ ಬಾಬುಲಾಲ  ಗೇಣು  ತನ್ನ ತೆಲೆಯನ್ನು ಬ್ರೀಟಿಷ ಲಾರಿಯ ಚಕ್ರಕಿಟ್ಟು  ಬಾರತಕ್ಕಾಗಿ ತನ್ನ ಪ್ರಾಣವನ್ನು ಅರ್ಪಣೆ ಮಾಡಿದ.  24 ರ ಹರೆಯದ ಭಗತ್ ಸಿಂಗ್  ರಾಜ ಗುರು ಸುಖದೆವರೊಂದಿಗೆ ಸೇರಿ  ನಗು ನಗುತ್ತ ನೇಣುಗಂಬವನ್ನು ಎರೀದ.  25 ರ ಆಜಾದ ತನಗೆ ತಾನೆ ಗುಂಡುಹಾರಿಸಿಕೊಂಡು  ತನ್ನನ್ನು ಬಾರತ ಮಾತೆಗೆ ಸಮರ್ಪಿಸಿಕೊಂಡ.  ಕನಿಷ್ಟ ಪಕ್ಷ 6.30ಲಕ್ಷ ಜನರ ಬಲಿದಾನ ಹಾಗೂ ರಕ್ತದ ಕೊಡಿಮೇಲೆ ಬಾರತ ದಸ್ವಾತಂತ್ರ್ಯ ತೇಲಿಬಂತು.
1947ಅಗಷ್ಟ 14 ರಂದು ಮದ್ಯ ರಾತ್ರೀ ಬ್ರೀಟಿಷರು ಬಾರತಕ್ಕೆ ಅಧಿಕಾರ ಹಸ್ತಾತಂರಿಸದ್ರು.  ನೆನಪಿಡಿ ಇದು ಅಧಿಕಾರ ಹಸ್ತಾತಂರ ಮಾತ್ರ, ಸ್ವಾತಂತ್ರ್ಯವಲ್ಲ
ಅಂದು ಮಧ್ಯ ರಾತ್ರೀ ಮೌಂಟ್ ಬ್ಯಾಟನ್ ಹೇಳಿದ ಮಾತು....  ನಾನು ಗೌರವಾನ್ವಿತ ಮಹರಾಜರ ಸಂದೇಶ ಒಂದನ್ನು ನಿಮಗೆ ತಿಳಿಸುವುದಿದೆ  ಈ ಐತಿಹಾಸಿಕ ದಿನದಂದು ಇಂಡಿಯಾ (ಬಾರತ) ದೇಶವೂ  ಬ್ರೀಟಿಷ  ಕಾಮನ್  ವ್ಯಲ್ತ್  ದೇಶದಲ್ಲಿಮುಕ್ತ ಮತ್ತು ಸ್ವತಂತ್ರ ರಾಜ್ಯವಾಗಿ ಸ್ಥಾನ ಪಡೆದಿದೆ. ಎಂದು ನೀಮಗೆಲ್ಲರಗೂ ಹೃತ್ಪೂರ್ವಕ ಹಾರೈಕೆಗಳನ್ನು ಸವಾನಿಸುತ್ತೆನೆ.  ಸ್ವಾತಂತ್ರ್ಯವನ್ನು ಬಯಸುವ ಎಲ್ಲರು ನಿಮ್ಮ ಈ ಸಂತೊಷದಲ್ಲಿ  ಪಾಲ್ಗೊಳ್ಳಲಿದ್ದಾರೆ....... ಜವಹಾರಲಾಲ ನೇಹರು ಅವರೊಂದಿಗೆ  ಒಪ್ಪಂದವನ್ನುಮಾಡಿಕೊಂಡು  ಬಾರತಿಯರು  ಎಂದಿದ್ದರು  ಬ್ರೀಟಿಷರ ವಸಾಹತ್ತು ಎಂದು ಸ್ಥೀರಿಕರಿಸಿ ಹೋದಾ.  ಬ್ರೀಟಿಷ್ರ ವಸಾಹತ್ತು ಆಗುವುದಂದ್ರೆ  ಇಂದಿಗೂ ಅವ್ರ ಗುಲಾಮರಾಗಿರುವೆವು ಎಂದರ್ಥ. ಅನುಮಾನವೇ ಇಲ್ಲ  ಬ್ರೀಟನ್ ರಾಣಿ ಬಾರತಕ್ಕೆ ಬರುವಾಗ ಇಂದಿಗೂ ವಿಸ್ಸಾ ಪಾಸ ಪೋರ್ಟ  ಪಡೆಯ ಬೇಕಾಗಿಲ್ಲ    ಆದ್ರೆ ನಮ್ಮ ಮಂತ್ರಿಗಳು ಲಂಡನ್ನಿಗೆ ಹೊಗಬೆಕಾದ್ರೆ  ರಾಣಿ  ಅನುಮತಿಯನ್ನು ಪಡೆದುಕೊಂಡೆ ಹೊಗಬೇಕು  ಈ ಒಪ್ಪೊಂದದ ಪ್ರಕಾರ ಬಾರತದ ಪ್ರಾಧನಿಗಿಂತ ಹೆಚ್ಚಿನ ಗೌರವ ಬ್ರೀಟನ್  ರಾಣಿಗೆ  ಸಿಗಬೇಕು   ದುರ್ದೈವ ವಷ  ಇಂದಿಗೂ ಚಾಚೂ ತಪ್ಪದೇ ಅನುಸ್ರಿಸುತ್ತಿದೆ  ಅಂದ್ರೆ ಬಾರತ ಬಿಳಿ  ಬ್ರೀಟಿಷರಿಂದ  ಕರಿ ಬ್ರೀಟಿಷರ  ಕೈಗೆಬಂದಿದೆ  ಅಷ್ಟೆ....!
ಸ್ವಾತಂತ್ರ್ಯ ಬಂದ ಕೆಲವೆ ವರ್ಷಗಳಲ್ಲಿ ಇದು ಸಾಬೀತಾಯಿತು.  ನಮ್ಮನಾಳಿದ ದೊರಗಳು ನಮ್ಮ ದೇಶವನ್ನು ಕಟ್ಟಬೇಕಾಗಿತ್ತು  ಅದ್ರೆ ಅವ್ರು ಈದೇಶದ  ಲೂಟಿಗೆ ನಿಂತ್ರು.  ಬ್ರಷ್ಟಾಚಾರದ ಮಹಾ ಪೂರವೇ ಹರಿಯಿತು 
ವಟ್ಟಾರೆಈ ದೇಶದಿಂದ  ಲಕ್ಷಾಂತ್ರ ಕೋಟಿರುಪಾಯಿ ವಿದೇಷಕ್ಕೆ ಹರಿದು ಹೊಯಿತು. ಇನ್ನು ಮುಂದುವರಿಯುತ್ತಲೆ ಇದೆ... ಕೊನೆ ಎಂದು....?

Sunday, April 22, 2012

 ಅದು ನಿರ್ಬಾವುಕ ಕಣ್ಣುಗಳ ಸಾಮ್ರಾಜ್ಯ......

ಸುಖ ಇಲ್ಲಿ ಸರಕು. ಉಂಡವರು ತೆಗತಾ ಹೊಗತಾರೆ, ಬಡಿಸಿದವರ ಪಾಲಿಗ ಮಾತ್ರ ಉಳಿಯೊದೆ ದುಖ. ಇಂತಹ ದು:ಖದ ನಡುವಿನಲ್ಲೆ ದಂದೆಗಿಳಿದವರ ಮಕ್ಕಳು ಬೆಳೆಯುತ್ತವೆ, ಬಡತನ ಕೀಳರೀಮೆ ಅವುಗಳ ಪಾಡು.
ಮಕ್ಕಳು ಮಕ್ಕಳೆ ಅವುಗಳ ಸಂಘರ್ಷವೇ ಬೇರೇ. ಬದುಕುನ ಹಿಂದಿನ ಕಟು ಸತ್ಯ ಅವುಗಳಿಗೆ ಬಾಲ್ಯದಲ್ಲೆ ಗೊತ್ತಾಗಬಾರದು. ಚಿಕ್ಕ ಚಿಕ್ಕದಲ್ಲಿ ದೋಡ್ಡ ಭವಿಷ್ಯ ವೆನಿಸುವ ಅವುಗಳದ್ದು ನಿಸ್ಕಲ್ಮಷ ಮನಸ್ಸು. ಆದರೇ ಕೆಂಪು ದೀಪದ ನೆರಳಲ್ಲಿ ಬೇಳೆಯುವ ಇಂತಹ ಮಕ್ಕಳ ಭವಿಷ್ಯ ಎನು?. ಅಮ್ಮ ಸುಖ ಮಾರಲು ಸಿದ್ದಳಾದರೆ, ಆ ಪುಟ್ಟ್‌ ಹುಡುಗಿ ಮಾತ್ರ ಪಾತ್ರೆತೊಳಿತಾಯುರುತ್ತೆ. ಆದೊಂದು ಬದುಕದಿರು ವಯಸ್ಸೇ ಅಲ್ಲಾ.  ಬುಟ್ ಅಮ್ಮನಿಗೆ ಸಾತ್ ನಿಡಲೆಬೇಕೂ, ಕೇಲಸ ಹಂಚಿಹೊಳ್ಳಲೆಬೇಕೂ, ಅದು ಕೆಂಪು ದಿಪದ ಇನ್ನೋಂದು ಮುಖ. ಅದರ ಬದಲಿಗ ಇನ್ನೋಂದು ಮುಖವು ಇದೇ, ಆ ಇನ್ನೋದು ಮುಖ ಬದುಕು ಗೊತ್ತಿಲ್ಲದೆ ಅದೇಷ್ಟೋ ಮಕ್ಕಳು ಕೆಂಪು ದೀಪದಡಿಯಲ್ಲಿ ಕಳೆದು ಹೋಗತಾಇವೆ.....!
ಕೆಂಪು ದೀಪದ ಬದುಕೆ ಹಾಗೆ, ಪುಟ್ಟ ಪುಟ್ಟ ಕೋಣೆಯಲ್ಲಿ ಬದುಕು ಅರಳಲೆ ಬೇಕು. ಅಲ್ಲೀಯೇ ಮತ್ತೊಂದು ಮಗುವೋಂದು ನಡೆಯಬೇಕು ಅಲ್ಲಿನ ಪ್ರತಿ ಕೋಣೆಗಳು ನರಕ ಕೂಪಗಳು. ಮಕ್ಕಳು,ಗಂಡ, ಟಿವಿ, ಸಿನೇಮಾ, ಅದೋಂದು ಪುಟ್ಟ ಪ್ರಪಂಚ . ಮಗುವಿನ ಮನಸ್ಸು ಸದಾ ಗಾಳಿ ತೋಡದ ತರಾ, ಹೊರಗೆ ಬಂದು ಹಾರಾಡ ಬಯಸುತ್ತೆ ಆದರೆ ಎನು ಮಾಡೊದು....?
ಕಂದಮ್ಮನ ಕಾಲಿಗೇ ಸರಪಳಿ ಬಿಗಿದು ಅಮ್ಮ ಸಿಖದ ತೇರು ಎಳೇಯಲು ಯೊರಟು ಹೋಗತಾಳೆ, ಅದು ಅವಳಿಗೆ ಅನಿವಾರ್ಯ, ಅದರೇ ಆ ಮಗುವಿನ ಪಾಡೆನು.? ಅಲ್ಲವಾ.!  ನರಕ ಕೂಪಕ್ಕೆ ಬಂದು ಬಿಟ್ಟಳಾ ಅಪ್ಸರೇ.....
ಎಷ್ಟೋಸಲ ಪುಟ್ಟಕಂದಮ್ಮಗಳನ್ನು ಬದಿಯಲ್ಲಿಟ್ಟು ಕೋಂಡೆ ಗಿರಾಕಿಗಳಿಗೆ ಕಾಯಬೇಕು. ಅಲ್ಲೇ ಇರುವ ಮಕ್ಕಳ ಪಾಡೇನು? ಅವುಗಳಿಗು ವೋದು ಬದುಕು ಇದೆ ಅಲವಾ? ಅದನ್ನು ಬಗಹರಿಸುವರು ಯಾರು? ಇಂತಹ ಸಮಯದಲ್ಲೆ ಜಾನ ಬ್ರೀಸ್ಕೀ ಅಂತವರು ಬರತಾರೆ ಅವಳು ಅವರ ಪಾಲಿಗೆ ದೇವರೇ ಸರಿ ಯಾಕಂದ್ರೆ ಆ ಮಕ್ಕಳಿಗೆ ನೆಲೆ ಕಿಪಿಸಿದಳು.

ಯಾರೇ ನೀ ದೇವತೇ........ಇಂತಹ ಕೆಂಪು ದೀಪದ ಮಕ್ಕಳ ಕೈಯಲ್ಲಿ ಕ್ಯಾಮರಾ ಕೊಟ್ಟು ಪೋಟೋತಗೆಯುವ ಕಲೆಯನ್ನು ಕಲಿಸಿದರೆ ಹೇಗೆ ಅಂತ ಯೋಚಿಸಿದವಳು ಅಮೆರಿಕಾದ ಪೋಟೋಗ್ರಾಫರ‍್ ಜಾನ್ ಬ್ರಸ್ಕೀ. ಆಕೆ ಕೇಂಪು ದೀಪದಲ್ಲಿದ್ದು ಅಲ್ಲಿನ ಬದುಕನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಳು. ಆಕೆ ಇಂದ ಆ ಕೆಂಪು ದೀಪದ ಮಕ್ಕಳಿಗೆ ಕತ್ತಲೆನಕೂಪದಿಂದ ಮುಕ್ತಿ ಸಿಕ್ಕಿತು ಜಗತ್ತಿನ ಇನ್ನೊಂದು ಮುಖ ಪರಿವಯವಾಯಿತು.

ಆಸೇ ಯಾರಿಗೇ ತಾನೇ ಇಲ್ಲಾ ಹೇಳಿ ಕ್ಯಾಮರಾ ಕೈಯಲ್ಲಿ ಭಮದ ತಕ್ಷಣ ಆ ಪುಟ್ಟ ಹುಡುಗಿ ಪೋಟೋ ತಗೆಯಲು ಸಿದ್ದಳಾದಳು ತಗೆದ ಪೋಟೋಗಳನ್ನು ಮೊಂದಿಟ್ಟು ಕೋಂಡು ಎನು ತಪ್ಪು ಮಾಡಿದ್ದಿರಿ ಅಂತಾ ಬ್ರಿಸ್ಕಿ ಹೃಳಿಕೊಡುತ್ತಿದ್ದಳು ಆ ಮಕ್ಕಳಿಗೆ ಎಂತಹದೊ ಕುಷಿ, ಹಾಕಂದ್ರೇ ಅಲ್ಲಿ ಇನ್ನೋದು ಬದುಕಿನ ಅನಾವರಣ ಇತ್ತು.
ಕೋಪು ದೀಪಗಳಂತಾ ದೇಶಗಳು ನಾನಾ ಕಡೆ ನಾಯಿಕೊಡೆಯಂತೆ  ತೆಲೆ ಎತ್ತುತ್ತಿವೆ. ಕಲ್ಕತ್ತಾಯೋಂದರಲ್ಲೆ ಲಕ್ಷಗಟ್ಟಲೆ ಹೆಣ್ಣುಮಕ್ಕಳು ಮೈ ಮಾರಿಕೊಳ್ಳುತ್ತಾಇದ್ದರೆ ಅಂದ ಮೇಲೇ ಅವರ ಮಕ್ಕಳ ಸಂಖ್ಯ ಯೋಚಿಸಿ....
                                                                                                                      ಸದಾನಂದ........
ಸತ್ಯವನ್ನು ಹೊರಗಿಡುವ ತುಡಿತ ನನ್ನಲ್ಲಿದೆ. ಮಾಧ್ಯಮದಿಂದ ತಿಳಿಯದ ಮಾತುಗಳ ತಿಳಿಸುವ ಹಂಬಲ ನನಗಿದೆ. ಇದಕ್ಕಾಗಿ ನನ್ನ ಪುಟ್ಟ ಪ್ರಯತ್ನ ಇಲ್ಲಿದೆ. ಇದಕ್ಕಾಗಿ ನಿಮ್ಮ ಬೆಂಬಲದ ನಿರೀಕ್ಷೆ ಇದೆ.