Monday, February 25, 2013
ಸಮೂಹದೊಳಗಿನ ಸತ್ಯ: ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ?
ಸಮೂಹದೊಳಗಿನ ಸತ್ಯ: ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ?: ಆತನ ಹೆಸರು ಮುತಿವುರ್ ಸಿದ್ದಿಕಿ . ಕೆಲಸ ಪತ್ರಕರ್ತ . ರಾಷ್ಟ್ರೀಯ ಇಂಗ್ಲಿಷ್ ದೈನಿಕ ಒಂದರಲ್ಲಿ ವರದಿಗಾರ. ಇದ್ದಕ್ಕಿದ್ದ ಹಾಗೆ ಸಿದ್ದಿಕಿ ಭಯೋತ್ಪಾಧಕನ...
ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ?
ಆತನ ಹೆಸರು ಮುತಿವುರ್ ಸಿದ್ದಿಕಿ . ಕೆಲಸ ಪತ್ರಕರ್ತ
. ರಾಷ್ಟ್ರೀಯ ಇಂಗ್ಲಿಷ್ ದೈನಿಕ ಒಂದರಲ್ಲಿ ವರದಿಗಾರ. ಇದ್ದಕ್ಕಿದ್ದ ಹಾಗೆ
ಸಿದ್ದಿಕಿ ಭಯೋತ್ಪಾಧಕನಾಗಿಬಿಟ್ಟ. ದೇಶದಾದ್ಯಂತ ಸ್ಟೋಟ ನಡೆಸುವ ಯೋಜನೆ ಹೊಂದಿದ್ದ
ಉಗ್ರರ ಮಾಸ್ಟರ್ ಪ್ಲಾನರ್ ಆಗಿಬಿಟ್ಟ. ರಾಜ್ಯದ ಪ್ರಮುಖ ಪತ್ರಕರ್ತರ ಕೊಲೆ
ಸಂಚಿನ ರುವಾರಿಯಾಗಿಬಿಟ್ಟ. ಇನ್ನು ಪೊಲೀಸರಂತ್ತೂ ಈತನ ಮೇಲೆ ಇಲ್ಲ ಸಲ್ಲದ
ಆರೋಪಗಳನ್ನು ಮಾಡಿ ಮಾದ್ಯಮದ ಮುಂದೆ ಹರಿದು ಬಿಟ್ಟರು. ಇಷ್ಟೇ ಸಾಕಾಯ್ತು ಒಬ್ಬ
ಪತ್ರಕರ್ತ ಯುವಕನ ಜೀವನ ಅಲ್ಲಿಗೆ ಮುಗಿದೇ
ಹೋಯಿತು. ಆತ ತಪ್ಪು ಮಾಡಿದ್ದಾನೋ,ನಿಜಕ್ಕೂ ಉಗ್ರರ ಜೊತೆ ನಂಟಿತ್ತೂ ? ಯಾರು ಈ
ಬಗ್ಗೆ ಚಿಂತಿಸಲಿಕ್ಕೆ ಹೋಗಲಿಲ್ಲ. ಹೆಸರಲ್ಲಿ ಮುಹಮ್ಮದನೀಯ ಜೊತೆಗೆ
ಭಯೋತ್ದಾದಕನೆಂದ ಘೋರ ಆರೋಪ ಇಷ್ಟೇ ಸಾಕಾಯ್ತು ಮಾಧ್ಯಮಗಳಲ್ಲಿ ಬಣ್ಣ ಬಣ್ಣದ
ವರದಿಗಳೂ ಪ್ರಸಾರವಾದವು. ಈತನೊಬ್ಬ ಪತ್ರಕರ್ತನಾದರೂ ಶಂಕಿತ ಉಗ್ರ ಎಂಬ
ಹಣೆಪಟ್ಟಿ ಬಿದ್ದ ಕೂಡಲೇ ಯಾರ ಪ್ರಗತಿಪರ ಚಿಂತಕರೂ , ಪತ್ರಕರ್ತ ಮಿತ್ರರೂ
ಅಷ್ಟೇ ಯಾಕೆ ಆತನ ಕೆಲಸ ಮಾಡುವ ಪತ್ರಿಕೆಯೂ ಆತನ ಬಗ್ಗೆ ಧ್ವನಿ ಎತ್ತಿಲ್ಲ.
ಯಾಕೆಂದರೆ ಆತ “ಶಂಕಿತ ಉಗ್ರ” ಆದರೆ ಶಂಕಿತ ಉಗ್ರ ಎಂಬ ಆರೋಪದಡಿಯಲ್ಲಿ
ಬಂಧಿತನಾದ ಸಿದ್ಧಿಕಿ ಮೇಲೆ ಹಾಕಲಾದ ಆರೋಪಕ್ಕೆ ಯಾವುದೇ ಸಾಕ್ಷಾಧಾರ ಇಲ್ಲದೇ
ಇರುವುದರಿಂದ ರಾಷ್ಟ್ರೀಯ ತನಿಖಾ ದಳ ಈತನ ಹೆಸರನ್ನು ಆರೋಪ ಪಟ್ಟಿಯಿಂದ
ಕೈಬಿಟ್ಟಿತ್ತು. ಇದೀಗ ವಿಶೇಷ ನ್ಯಾಯಾಲಯ ಸಿದ್ಧಿಕಿಯನ್ನು ಕೂಡಲೇ ಬಿಡುಗಡೆ
ಗೊಳಿಸುವಂತ್ತೆ ಆದೇಶ ನೀಡಿದೆ. ಈ ಪ್ರಕರಣವನ್ನು ನೋಡಿದ್ರೆ ನಿಜಕ್ಕೂ ಖೇದಕರ
ಅನ್ನಿಸುತ್ತಿದೆ. ನಾನು ನಿರಪರಾದಿಯಾಗಿಯೂ ಸಿದ್ಧಿಕಿ ಎಂಬ ಹೆಸರಿದ್ದ ಕಾರಣ
ಶಂಕಿತ ಉಗ್ರ ಅನ್ನಿಸಿಕೊಳ್ಳಬೇಕಾಯಿತು. ದೇಶದ ಜನರೆಲ್ಲಾ ಈತನನ್ನು ನೋಡಿ ಅಸಹ್ಯ
ಪಡುವಂತ್ತಾಯಿತು. ಎಂಥಹಾ ಮಗನಿಗೆ ಜನ್ಮ ಕೊಟ್ಟೆಯಾ ನೀ ಮಹಾಮ್ಮಾರಿ ಅಂತ್ತ ಎಲ್ಲರೂ
ಈತನ ಹೆತ್ತವ್ರಿಗೆ ಕ್ಯಾಕರಿಸಿ ಉಗಿಯುವಂತ್ತಾಯಿತು. ಭಯೋತ್ಪಾಧನೆ , ನಕ್ಸಲ್
ನಿಗ್ರಹದ ಹೆಸರಲ್ಲಿ ಹೀಗೆ ನೈಜ್ಯ ಆರೋಪಿಗಳ ಜೊತೆಗೆ ಇಂಥಹಾ ಅಮಾಯಕರೂ ಎಲ್ಲರ
ಪಾಲಿಗೆ ಕೆಟ್ಟವರಾಗಿ ಬಿಂಬಿತರಾಗಿಬಿಡುತ್ತಾರೆ. ಪೊಲೀಸರ ಮಾಧ್ಯಮಗಳ ಸಣ್ಣ ತಪ್ಪುಗೆ
ಹೀಗೆ ಅಮಾಯಕರೂ ಬಲಿಯಾಗುತ್ತಲೇ ಇರುವುದು ವಿಪರ್ಯಾಸ. ಭಯೋತ್ಪಾಧನೆ ಎಂಬುವುದು
ಖಂಡಿತ ಸಹಿಸಲಸಾಧ್ಯ . ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ನೈಜ್ಯ
ಭಯೋತ್ದಾದಕರಿಗೆ ಕಠಿಣ ಶಿಕ್ಷಯಾಗಲೇ ಬೇಕು. ಯಾಕೆಂದರೆ ಇವರೆಲ್ಲಾ ಅಮಾಯಕರ ರಕ್ತ
ಚೆಲ್ಲಿ ಖುಷಿಪಡುವವರು. ಮಾನವಿಯತೆಯ ಮರೆತ ಕ್ರೂರಿಗಳು. ಈ ಕ್ರೂರಿಗಳನ್ನು ಯಾವ
ಧರ್ಮಮಿಯರೂ ರಕ್ಷಿಸಬಾರದು. ಆದ್ರೆ ನಿರಪರಾದಿಗಳಿಗೆ ಇಂಥಹಾ ಪಟ್ಟವನ್ನು
ಕಟ್ಟುವುದು ಅಷ್ಟೇ ಕ್ರೂರತನ. ದೇಶದ ಸಂವಿಧಾನ ಹೇಳಿದಂತ್ತೆ ಸಾವಿರ ಅಪರಾಧಿಯೂ
ಶಿಕ್ಷೆಯಿಂದ ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದಲ್ಲವೇ ?????
Subscribe to:
Comments (Atom)